ಅನುವಾದ ಸಂಗಾತಿ
ಇಂಗ್ಲೀಷ್ ಮೂಲ: ರುಡಯಾರ್ಡ ಕಿಪ್ಲಿಂಗ್.
ಕನ್ನಡಕ್ಕೆ: ನಾಗರೇಖಾ ಗಾಂವಕರ
![](https://i0.wp.com/sangaati.in/wp-content/uploads/2024/06/download-2-7.jpg?ssl=1&resize=195%2C195)
![](https://i0.wp.com/sangaati.in/wp-content/uploads/2024/06/nagarekha-682x1024.png?ssl=1&resize=853%2C853)
ಓ.ಅವ್ವಾ. ನನ್ನವ್ವಾ..
![](https://sangaati.in/wp-content/uploads/2024/06/download-1-10.jpg)
ಓ.ಅವ್ವಾ. ನನ್ನವ್ವಾ..
ಒಂದೊಮ್ಮೆ
ದೊಡ್ಡ ಬೆಟ್ಟದ ತುತ್ತತುದಿಗೆ
ನೇತು ಹಾಕಿದರೂ ನನ್ನ
ಅವ್ವಾ. ನನ್ನವ್ವಾ.
ನನಗೆ ಗೊತ್ತು , ಯಾರ ಪ್ರೀತಿ ಸದಾ
ನನ್ನ ಹಿಂಬಾಲಿಸುವುದೆಂದು
ಅವ್ವಾ, ನನ್ನವ್ವಾ..
ಒಂದೊಮ್ಮೆ
ಆಳಸಾಗರದಡಿಯಲಿ
ಮುಳುಗಿ ಕೆಡವಿದರೂ ನನ್ನ
ಅವ್ವಾ ನನ್ನವ್ವಾ
ನನಗೆ ಗೊತ್ತು , ಯಾರ ಕಣ್ಣೀರು
ನನ್ನಲ್ಲಿಗೆ ಹರಿದು ಬರುವುದೆಂದು
ಅವ್ವಾ, ನನ್ನವ್ವಾ..
ದೇಹ ಆತ್ಮಗಳೆರಡು
ಬೇರ್ಪಡಿಸಲ್ಪಟ್ಟರೂ
ಅವ್ವಾ ನನ್ನವ್ವಾ, ನನಗೆ ಗೊತ್ತು
ಯಾರ ಪ್ರಾರ್ಥನೆಗಳು ನನ್ನ
ಮತ್ತೆ ಜೀವಂತಗೊಳಿಸುವೆಂದು.
ಅವ್ವಾ ನನ್ನವ್ವಾ.
ಓ ಅವ್ವಾ, ನನ್ನವ್ವಾ..
ಮೂಲ: ರುಡಯಾರ್ಡ ಕಿಪ್ಲಿಂಗ್.
ಕನ್ನಡಕ್ಕೆ: ನಾಗರೇಖಾ ಗಾಂವಕರ.